Informative, Encyclopedic Articles For The Whole Family On Life, Life-styles, Science, History, Fun, General Knowledge & New Research. A Repository of Knowledge! - in Kannada & English, by G ANIL KUMAR
Thursday, 22 July 2010
1000 ವರ್ಷ ಬದುಕಲು ಸಾಧ್ಯವೆ?
ನೂರು ವರ್ಷ ಬದುಕುವ ಆಸೆ ಎಲ್ಲರಿಗೂ ಇರುತ್ತೆ. ಒಳ್ಳೆಯ ಶರೀರ ಪ್ರಕೃತಿ, ಒಳ್ಳೆಯ ನೈಸಗರ್ಿಕ ಜೀವನ ವಿಧಾನ, ಉತ್ತಮ ಆಹಾರ-ವಿಹಾರ, ಸಮಾಧಾನಕರ ಆರೋಗ್ಯ ಇರುವವರು ಯಾವುದೇ ದುರಂತಗಳಿಗೆ ತುತ್ತಾಗದೇ ಇದ್ದರೆ ನೂರು ವರ್ಷ ಬದುಕಬಹುದು.
ಆದರೆ ಸಾವಿರ ವರ್ಷ ಬದುಕಬಹುದೆ? ಅಷ್ಟು ವರ್ಷಗಳ ಕಾಲ ಇರುವ ಮರಗಳೇನೋ ಇವೆ. ಮನುಷ್ಯರು ಏನಾದರೂ ಪ್ರಯತ್ನ ಮಾಡಿ ಸಾವಿರ ವರ್ಷ ಬದುಕುವಂತೆ ಮಾಡಿಕೊಳ್ಳಲಾದೀತೆ?
ಕೇಂಬ್ರಿಜ್ ವಿಶ್ವವಿದ್ಯಾಲಯದ ಜೆನೆಟಿಕ್ ಹಾಗೂ ವೃದ್ದಾಪ್ಯ ತಜ್ಞ ಡಾ. ಔಬ್ರೆ ಡಿ ಗ್ರೇ `ಹೌದು, ಮನುಷ್ಯರು ಸಾವಿರ ವರ್ಷ ಬದುಕಬಹುದು' ಎಂದು ಸತತವಾಗಿ ವಾದಿಸುತ್ತಿದ್ದಾರೆ. 2006ರಲ್ಲಿ ಆಕ್ಸ್ಫಡರ್್ ವಿಶ್ವವಿದ್ಯಾಲಯದಲ್ಲಿ ಐದು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು. `ನಾಳೆಯ ಜನರು: ಆಯುಷ್ಯವರ್ಧನೆ ಹಾಗೂ ತಾಂತ್ರಿಕ ಸವಾಲುಗಳು' - ಎಂಬುದು ಆ ಸಮ್ಮೇಳನದ ಚಚರ್ಾವಿಷಯ. ಮನುಷ್ಯರು ತಮ್ಮ ಶರೀರವನ್ನು ನವೀಕರೀಸಿಕೊಳ್ಳಬಹುದೆ? ಮರುಜೋಡಣೆ ಮಾಡಿಕೊಳ್ಳಬಹುದೆ? ಇಷ್ಟಕ್ಕೂ `ನೈಸಗರ್ಿಕ' ಎಂದರೇನು? ಇದರಲ್ಲಿ ನಾವೆಷ್ಟು ಬದಲಾವಣೆ ತರಬಹುದು? ಇತ್ಯಾದಿ ವಿಷಯಗಳ ಬಗ್ಗೆ ಚಚರ್ೆ ನಡೆಯಿತು.
ನಮ್ಮ ಭೌತಿಕ ಗಡಿಯನ್ನು ಇನ್ನಷ್ಟು ವಿಸ್ತರಿಸಿ 150 ಅಥವಾ 200 ವರ್ಷಗಳು ಬದುಕಲು ಸಾಧ್ಯ ಎಂದು ನಂಬುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಇಂತಹವರು ತಮ್ಮನ್ನು `ಟ್ರಾನ್ಸ್ಹ್ಯೂಮನಿಸ್ಟ್ಸ್' ಎಂದುಕೊಳ್ಳುತ್ತಾರೆ. ಮಾನವರ ಶಾರೀರಿಕ, ಬೌದ್ಧಿಕ ಸಾಮಥ್ರ್ಯವನ್ನು ಹೊಸ ತಂತ್ರಜ್ಞಾನಗಳ ಮೂಲಕ ಹೆಚ್ಚಿಸಬಹುದು ಎಂಬುದು ಅವರ ನಂಬಿಕೆ. ಈ ಕುರಿತು ಸೈಮನ್ ಯಂಗ್ ಎನ್ನುವವರು `ಡಿಸೈನರ್ ಇವಲ್ಯೂಷನ್' ಎಂಬ ಪುಸ್ತಕ ಪ್ರಕಟಿಸಿದ್ದಾರೆ.
ಕೆಲವು ಜೆನೆಟಿಕ್ ತಂತ್ರಜ್ಞಾನದ ಸಾಧನೆಗಳಿಂದಾಗಿ ಮುಂಬರುವ ವರ್ಷಗಳಲ್ಲಿ ಸಾವಿರ ವರ್ಷ ಬದುಕುವಂತೆ ಮಾಡಬಹುದು ಎಂದು ಔಬ್ರೆ ವಾದಿಸುತ್ತಾರೆ. ಜನರಿಗೆ ರೋಗವೇ ಬರದಂತೆ ನೋಡಿಕೊಳ್ಳುವುದು, ಯಾವ ರೋಗ ಬಂದರೂ `ಠಣ್' ಅಂತ ವಾಸಿಮಾಡುವುದು, ಮುಂದೆ ಎಂದೋ ಒಂದು ದಿನ ಸಾಧ್ಯವಾಗುತ್ತದೆ; ಅದರ ಜೊತೆಗೆ ಶರೀರದ ತಾರುಣ್ಯ ಉಳಿಸುವ ತಂತ್ರಜ್ಞಾನವೂ ಅಭಿವೃದ್ಧಿಯಾದರೆ ಸಾವಿರ ವರ್ಷ ಸೊಗಸಾಗಿ ಬದುಕಬಹುದು ಎಂಬುದು ಅವರ ನಂಬಿಕೆ.
ಔಬ್ರೇ ಡಿ ಗ್ರೇ ದುಡ್ಡಿಗಾಗಿ ಈ ರೀತಿ ವಾದ ಮಾಡುತ್ತಿದ್ದಾರೆ ಎಂದೂ ಯಾರೂ ಆರೋಪಿಸುವುದಿಲ್ಲ. ಆದರೆ ಅವರ ನಂಬಿಕೆಯನ್ನು ಎಲ್ಲರೂ ಒಪ್ಪಿಲ್ಲ. `ಈ ಕನಸಿಗೂ ಮಿತಿ ಇರಬೇಕು. ಈತ ಒಂದು ರೀತಿ ವಿಚಿತ್ರ ವ್ಯಕ್ತಿ. ಜನರ ಆಯುಷ್ಯ ಪ್ರಮಾಣ ಒಂದಿಷ್ಟು ಹೆಚ್ಚಾಗಬಹುದು. ಹೊಸ ಸಂಶೋಧನೆೆಗಳ ಫಲವಾಗಿ ನೂರು ವರ್ಷ ಬದುಕುವವರ ಸಂಖ್ಯೆ ಹೆಚ್ಚಬಹುದು. ಅಥವಾ ಅತಿದೀಘರ್ಾಯುಗಳು 120-150 ವರ್ಷ ಬದುಕಬಹುದು ಅಷ್ಟೇ' ಎನ್ನುವ ವಿಜ್ಞಾನಿಗಳೇ ಹೆಚ್ಚು.
ಅದೇನೇ ಇರಲಿ. ಜನರು ಸಾವಿರ ವರ್ಷ ಬದುಕಿ ಮಾಡುವುದೇನು? ಎಲ್ಲರೂ ಸಾವಿರ ವರ್ಷ ಬದುಕುವಂತಾಯಿತು ಎಂದುಕೊಳ್ಳೋಣ. ಆಗ ಎಷ್ಟು ವರ್ಷಗಳ ಕಾಲ `ಬಾಲ್ಯಾವಸ್ಥೆ' ಇರುತ್ತದೆ? ಯೌವನದ ಅವಧಿ ಎಷ್ಟು? ಯಾವ ವಯಸ್ಸಿನವರನ್ನು `ಮುದುಕರು' ಎನ್ನಬಹುದು? - ಈ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿಲ್ಲ!
ಇನ್ನೂ ಕೆಲವು ಗಂಭೀರ ಪ್ರಶ್ನೆಗಳೂ ಏಳುತ್ತವೆ. ಪ್ರತಿ ದಂಪತಿಗಳೂ ಸುಮಾರು 300-400 ವರ್ಷಗಳ ಕಾಲ 100-150 ಮಕ್ಕಳನ್ನು ಹಡೆದರೆ ಗತಿ ಏನು? ಸಾವಿರ ವರ್ಷ ಬದುಕಿದ ಮಾತ್ರಕ್ಕೆ ಅವರ ಆಥರ್ಿಕ ಪರಿಸ್ಥಿತಿ ಏನೂ ಬದಲಾಗುವುದಿಲ್ಲ ಅಲ್ಲವೆ?
ಸಂಶೋಧನೆ ಯಶಸ್ವಿಯಾದ ಮೊದಲ ಒಂದು ಸಾವಿರ ವರ್ಷಗಳಲ್ಲಿ ಯಾರೂ ಸಾಯದಿದ್ದರೆ ಭೂಮಿಯ ಒಟ್ಟು ಜನಸಂಖ್ಯೆ ಎಷ್ಟಾಗುತ್ತದೆ? ಅಷ್ಟೊಂದು ಜನರಿಗೆ ಆಹಾರ, ಬಟ್ಟೆ, ಮನೆಗಳನ್ನು ಒದಗಿಸಲು ಸಾಧ್ಯವಾದೀತೆ? ಉದ್ಯೋಗ ಎಲ್ಲಿಂದ ತಂದು ಕೊಡುವುದು? ಸಂಬಳ-ಭತ್ಯೆ ಒದಗಿಸುವುದು, ಪೆನ್ಷನ್ ನೀಡುವುದು ಹೇಗೆ? ದೇಶದ ಹಾಗೂ ಜಗತ್ತಿನ ಹಣಕಾಸು ವ್ಯವಹಾರಗಳ ಕಥೆ ಏನು?
ಆಮೇಲೆ ನಮ್ಮ ರಾಜಕಾರಣಿಗಳು ಈಗಿನ ಪಂಚವಾರ್ಷಿಕ ಯೋಜನೆಗಳಿಗೆ ಬದಲಾಗಿ `ಶತವಾರ್ಷಿಕ ಯೋಜನೆಗಳನ್ನು' ಹಾಕಲು ಶುರುಮಾಡಿಕೊಳ್ಳುತ್ತಾರಷ್ಟೆ! ಅವರ ಸಂಸದೀಯ ಸದಸ್ಯತ್ವದ ಅವಧಿಯೂ ಐದರಿಂದ ಐವತ್ತು ವರ್ಷಗಳಿಗೆ ಏರಿಕೆಯಾಗಿಬಿಡುತ್ತದೆ!!
ಒಟ್ಟಿನಲ್ಲಿ ನಾವು ಹೇಗೆ ಒಳ್ಳೆಯ ರೀತಿ ಬದುಕುತ್ತೇವೆ ಎನ್ನುವುದೇ ಮುಖ್ಯ, ಅಲ್ಲವೆ?
Subscribe to:
Post Comments (Atom)
Nij erabahudu ...??
ReplyDelete