Wednesday, 21 July 2010

ಅನ್ಯ ಗ್ರಹಗಳಲ್ಲಿ ಜೀವಿಗಳಿವೆಯೆ?

ಈ ಬ್ರಹ್ಮಾಂಡದಲ್ಲಿ ನಾವು ಒಂಟಿಯೆ? ಭೂಮಿಯಂತೆ ಜೀವಿಗಳನ್ನು ಹೊಂದಿರುವ ಇನ್ನೊಂದು ಗ್ರಹ ಇದೆಯೆ? ಇದ್ದರೆ ಅದನ್ನು ಪತ್ತೆಹಚ್ಚಿ ಆ ಜೀವಿಗಳನ್ನು ಮಾತನಾಡಿಸಿ...ವ್ಹಾ!!


ಬೇರೆ ಗ್ರಹಗಳಿಂದ `ಮಾನವರು' ಭೂಮಿಗೆ ಎಂದಾದರೂ ಬಂದಿದ್ದಾರೆಯೆ? ಹಾಗೆಂದು ಹೇಳಲು ಆಧಾರಗಳಿಲ್ಲ ಎನ್ನುವುದು ಬಹುತೇಕ ವಿಜ್ಞಾನಿಗಳ `ಅಧಿಕೃತ' ನಿಲುವು. ಆದರೂ ಅನ್ಯಗ್ರಹ ಜೀವಿಗಳ ಬಗ್ಗೆ ಕುತೂಹಲ ಇದ್ದೇ ಇದೆ. ವಿಜ್ಞಾನಿಗಳು ತಮ್ಮ ಅನ್ವೇಷಣೆ ಮುಂದುವರಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ನಲ್ಲಿರುವ ಕಾನರ್ೆಗಿ ಇನ್ಸ್ಟಿಟ್ಯೂಟ್ 17,129 ಗ್ರಹಗಳ ಪಟ್ಟಿ ತಯಾರಿಸಿದೆ. ಈ ಗ್ರಹಗಳಲ್ಲಿ ಯಾವುದಾರೊಂದು ರೀತಿಯ ಜೀವಿಗಳು ಇರಬಹುದಾದ ವಾತಾವರಣ, ಪರಿಸರ ಇದೆ ಎಂದು ತಿಳಿಸಿದೆ. `ಹೌದೇ, ನೋಡಿಯೇ ಬಿಡೋಣ' ಎಂದು ಪತ್ತೆಹಚ್ಚಲು ಸರ್ರೆಂದು ಹೊರಡುವ ತಂತ್ರಜ್ಞಾನ ಸದ್ಯಕ್ಕೆ ನಮ್ಮ ಬಳಿ ಇಲ್ಲ. ದೂರದರ್ಶಕ ಹಾಕಿಕೊಂಡೋ ಇತರ ವಿಧಾನ ಅನುಸರಿಸಿಕೊಂಡೋ ಒಂದೊಂದು ಗ್ರಹವನ್ನೇ ಪರೀಕ್ಷಿಸಲು ಹೊರಟರೆ ದಶಕಗಳೇ ಹಿಡಿಯುತ್ತವೆ. ಆಗಲೂ ನಿಖರ ಫಲಿತಾಂಶ ಸಿಗುತ್ತದೆಯೇ ಎಂಬುದನ್ನು ಹೇಳಲಾಗದು.

ಯಾವುದಾರೊಂದು ಗ್ರಹದಲ್ಲಿ ಜೀವಿಗಳು ವಿಕಾಸವಾಗಲು ಆ ಗ್ರಹಕ್ಕೆ ಏನಿಲ್ಲವೆಂದರೂ 300 ಕೋಟಿ ವರ್ಷಗಳಷ್ಟಾದರೂ ವಯಸ್ಸಾಗಿರಬೇಕು. ಅದು ಭೂಮಿಯಂತಹ ಗ್ರಹವಾಗಿರಬೇಕು ಎನ್ನುತ್ತಾರೆ ವಿಜ್ಞಾನಿಗಳು.

ಯಾವುದಾದರೂ ಗ್ರಹಗಳಲ್ಲಿ ನಮಗಿಂತಲೂ ಬುದ್ಧಿವಂತ ಜೀವಿಗಳಿದ್ದರೆ ಅವರು ನಮ್ಮನ್ನು ಇನ್ನೂ ಏಕೆ ಸಂಪಕರ್ಿಸಿಲ್ಲ?

`ಅವರು ನಿಗೂಢ ವಾಹನಗಳಲ್ಲಿ (ಹಾರುವ ತಟ್ಟೆಗಳು) ನಮ್ಮ ಬಳಿ ಬರುತ್ತಿದ್ದಾರೆ. ನಾವದನ್ನು ಕಂಡಿದ್ದೇವೆ' ಎಂದು ಅನೇಕರು ಹೇಳುವುದನ್ನು ನೀವು ಕೇಳಿರಬಹುದು. ಅವುಗಳಿಗೆ `ಗುರುತು ಪತ್ತೆಯಾಗದ ಹಾರುವ ವಸ್ತುಗಳು' - `ಯುಎಫ್ಒ' ಎನ್ನುತ್ತಾರೆ. ಆದರೆ `ಈ ಯುಎಫ್ಒ ಬಗ್ಗೆ ಜನರು ಮಾಡಿರುವ ವರದಿಗಳು ಖಚಿತವಲ್ಲ. ಬೆಳಕಿನ ಉಂಡೆಗಳಂತೆ ಕಾಣುವ ಯುಎಫ್ಒಗಳು ವಾಸ್ತವವಾಗಿ ಆಗಸದಲ್ಲಿ ಜರುಗುತ್ತಿರುವ ಕೆಲವು ಪರಿಸರ ವಿದ್ಯಮಾನಗಳು. ಅವನ್ನು ವಾಹನಗಳು ಎಂದು ಜನರು ಭ್ರಮಿಸಿದ್ದಾರೆ. ಕೆಲವರು ಪ್ರಚಾರದ ಆಸೆಯಿಂದಲೂ ಸುಳ್ಳು ಹೇಳುತ್ತಾರೆ' ಎನ್ನುವುದು ವಿಜ್ಞಾನಿಗಳ `ಅಧಿಕೃತ' ಅಭಿಪ್ರಾಯ. ಆದರೂ ಈ ಕುರಿತ ಅನುಮಾನಗಳು ಇನ್ನೂ ಬಗೆಹರಿದಿಲ್ಲ.

ಬ್ರಹ್ಮಾಂಡದಲ್ಲಿ ಜೀವಿಗಳಿರಬಹುದು ಎಂಬ ಆಶಾಭಾವನೆ ಮಾತ್ರ ವಿಜ್ಞಾನಿಗಳಿಗೂ ಹೋಗಿಲ್ಲ. 1960ರಲ್ಲಿ ಫ್ರಾಂಕ್ ಡೇಕ್ ಎನ್ನುವ ಖಗೋಳಜ್ಞ 85 ಅಡಿ ರೇಡಿಯೋ ಡಿಷ್ ಬಳಸಿ ಅಮೆರಿಕದ ವಜರ್ೀನಿಯಾದಲ್ಲಿರುವ ರಾಷ್ಟ್ರೀಯ ಖಗೋಳ ವೀಕ್ಷಣಾಲಯದಿಂದ ಅನ್ಯಗ್ರಹಗಳಿಂದ ಏನಾದರೂ ರೇಡಿಯೋ ಸಂದೇಶ ಬರುತ್ತಿದೆಯೇ ಎಂದು ಆಲಿಸಿದರು. ಫಲಿತಾಂಶ `ಟುಸ್' ಆಯಿತು.

ಆದರೂ `ನಮ್ಮನ್ನು ಯಾರೋ ಸಂಪಕರ್ಿಸುತ್ತಾರೆ' ಎಂಬ ನಂಬಿಕೆ ಪ್ರಬಲವಾಗಿ ಬೆಳೆಯಿತು. ಅವರು ನಮ್ಮನ್ನು ಸಂಪಕರ್ಿಸುತ್ತಿದ್ದರೂ ನಮಗದು ತಿಳಿಯುತ್ತಿಲ್ಲ ಎಂದು ವಾದಿಸುವವರೂ ಹುಟ್ಟಿಕೊಂಡರು. ಕ್ಯಾಲಿಫೋನರ್ಿಯಾದಲ್ಲಿ `ಸೇಟಿ' (ಎಸ್ಇಟಿಐ- ಬಾಹ್ಯಾಕಾಶ ಬುದ್ಧಿಜೀವಿಗಳಿಗಾಗಿ ಅನ್ವೇಷಣೆ) ಇನ್ಸ್ಟಿಟ್ಯೂಟ್ ಎಂಬ ಖಾಸಗಿ ಸಂಸ್ಥೆಯ ಸ್ಥಾಪನೆಯಾಯಿತು. ಅದೀಗ ಇಂಟರ್ನೆಟ್ ಮೂಲಕ ಸಾವಿರಾರು ಸದಸ್ಯರನ್ನು ಹೊಂದಿದ್ದು, ಅವರೆಲ್ಲ ಅನ್ಯಗ್ರಹಗಳ ರೇಡಿಯೋ ಸಂಕೇತಗಳನ್ನು ಆಲಿಸಲು ದಿನವೂ ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಅಂತಹ ಯಾವುದೇ ಸಂಕೇತ ದೊರೆತ ವರದಿಗಳು ಬಂದಿಲ್ಲ.
ಅದು ಹೋಗಲಿ, ನಾವೇ ಅನ್ಯಗ್ರಹವಾಸಿಗಳನ್ನು ಸಂಪಕರ್ಿಸಿದರೆ!?

1972ರಲ್ಲಿ ಮಾನವ ಗಂಡು-ಹೆಣ್ಣುಗಳ ಚಿತ್ರವಿರುವ ಫಲಕವನ್ನು ಪಯೋನಿಯರ್-10 ಉಪಗ್ರಹಕ್ಕೆ ಅಳವಡಿಸಿ ಹಾರಿಬಿಡಲಾಗಿದೆ. ಯಾರಾದರೂ ನೋಡಿದರೆ ನಮ್ಮನ್ನು ಕಂಡುಹಿಡಿಯಲಿ ಎಂಬುದು ಅದರ ಆಶಯ. ಇಂತಹ ಅನೇಕ ಪ್ರಯತ್ನಗಳಾಗಿವೆ. 1977ರಲ್ಲಿ ಧ್ವನಿಮುದ್ರಣವನ್ನೂ ಬಾಹ್ಯಾಕಾಶಕ್ಕೆ ರವಾನಿಸಲಾಗಿದೆ. 55 ಬಾಷೆಗಳ ಗ್ರೀಟಿಂಗ್, ಬಲ್ಗೇರಿಯಾದ ಜಾನಪದ ಗೀತೆಗಳನ್ನು ವಾಯೇಜರ್ ಉಪಗ್ರಹ ತೆಗೆದುಕೊಂಡು ಹೋಗಿದೆ.

2006ರಲ್ಲಿ `ಕಾಸ್ಮಿಕ್ ಕನೆಕ್ಷನ್' ಎನ್ನುವ ಟಿವಿ ಕಾರ್ಯಕ್ರಮವನ್ನು ಭೂಮಿಯಿಂದ 45 ಜ್ಯೋತಿರ್ವರ್ಷಗಳಷ್ಟು ದೂರವಿರುವ (ಒಂದು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಕ್ರಮಿಸುವುದು ಬೆಳಕಿನ ವೇಗ. ಈ ವೇಗದಲ್ಲಿ 45 ವರ್ಷ ಕ್ರಮಿಸಬೇಕಾದಷ್ಟು ದೂರ!) ಎರೈ ಎನ್ನುವ ನಕ್ಷತ್ರದ ಕಡೆದೆ ತೂರಿಬಿಡಲಾಗಿದೆ.  ವೀಡಿಯೊ ಅಲ್ಲಿಗೆ 2051ರಲ್ಲಿ ತಲುಪುತ್ತದೆ. ಅಲ್ಲಿಂದ ಯಾರಾದರೂ ತಕ್ಷಣ ಬೆಳಕಿನವೇಗದಲ್ಲೇ ಉತ್ತರ ಕಳುಹಿಸಿದರೂ ಅದು ಭೂಮಿಯನ್ನು ಮುಟ್ಟಲು ಇನ್ನೂ 45 ವರ್ಷಗಳು ಬೇಕು.

ಅಲ್ಲಿಯವರೆಗೂ ಕಾದು ನೋಡೋಣ!

No comments:

Post a Comment