ಇತಿಹಾಸ ಬೋರಲ್ಲ. ಅದು ಬಹುಮುಖ್ಯವಾದ ವಿಷಯ. ಏಕೆ ಗೊತ್ತೆ?
ಇಷ್ಟಕ್ಕೂ ಇತಿಹಾಸ ಎಂದರೇನು? ಸುಲಭವಾಗಿ ಹೇಳುವುದಾದರೆ ಇತಿಹಾಸ ನಮ್ಮ ಹಿಂದಿನ ಕಾಲದ ಬಗೆಗಿನ ಅರಿವು. ನಮ್ಮ ಹಿಂದಿನವರ ವಿಷಯಗಳನ್ನು ತಿಳಿದುಕೊಳ್ಳುವುದು. ಹಿಂದಿನ ಜನರ ಜೀವನ, ಹಿಂದೆ ನಡೆದ ಘಟನೆಗಳು, ಯುದ್ಧಗಳು, ಹಿಂದೆ ಇದ್ದ ಸಕರ್ಾರಗಳು, ರಾಜರುಗಳು - ಹೀಗೆ ಹಲವು ಸಂಗತಿಗಳನ್ನು ಕುರಿತು ಅಧ್ಯಯನ ಮಾಡುವುದು.
ಹಿಂದಿನ ರಾಜರು, ರಾಜಕೀಯ, ಆಥರ್ಿಕ, ಮಿಲಿಟರಿ ಕಾಯರ್ಾಚರಣೆಗಳು ಹೇಗೆ ಇತಿಹಾಸವೋ ಹಾಗೆಯೇ ಹಿಂದಿನ ಸಾಮಾನ್ಯ ಜನರ ಜೀವನ ವಿಧಾನವನ್ನು ಕುರಿತ ವಿವರಗಳೂ ಸಹ ಇತಿಹಾಸ. ಅವರ ನಂಬಿಕೆ, ಆಚಾರ, ವಿಚಾರ, ಧರ್ಮ, ನಡವಳಿಕೆ - ಇವೆಲ್ಲವೂ ಇತಿಹಾಸದ ಅಧ್ಯಯನ ವಸ್ತುಗಳೇ.
ನಮ್ಮ ಇಂದಿನ ಜೀವನಕ್ಕೂ ಇತಿಹಾಸಕ್ಕೂ ಏನು ಸಂಬಂಧ? ನಾವೇಕೆ ಇತಿಹಾಸ ತಿಳಿದುಕೊಳ್ಳಬೇಕು? ಏಕೆಂದರೆ ಇತಿಹಾಸ ನಮ್ಮ ಇಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಾವಿಂದು ಬದುಕುತ್ತಿರುವ ರೀತಿಗೂ ನಮ್ಮ ಪರಿಸ್ಥಿತಿಗೂ ಇತಿಹಾಸವೇ ಕಾರಣ.
ಈಗ ನೋಡಿ. ದಶಕಗಳ, ಶತಮಾನಗಳ ಅಥವಾ ಸಹಸ್ರಾರು ವರ್ಷಗಳ ಹಿಂದೆ ತೆಗೆದುಕೊಳ್ಳುವ ಯಾವುದೋ ಒಂದು ನಿರ್ಣಯದ ಫಲವಾಗಿ ನಮ್ಮ ಜೀವನದ ಸ್ವರೂಪ ಇರುತ್ತದೆ. ಉದಾಹರಣೆಗೆ ಮಹಾವೀರನ ಅಹಿಂಸೆ ಅವನ ಅನುಯಾಯಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ ನೋಡಿ. ಇಂದು ಕೋಟ್ಯಂತರ ಜೈನರು ಶುದ್ಧ ಸಸ್ಯಾಹಾರಿ ವಿಶಿಷ್ಟ ಆಹಾರ ಪದ್ಧತಿ ಅನುಸರಿಸುತ್ತಾರೆ. ಇನ್ನೊಂದು ಉದಾಹರಣೆ. ಯಾರೋ ಎಂದೋ ಭಾರತಕ್ಕೆ ಕಾಫಿ ಬೀಜ ತಂದರು. ಇಂದು ದೇಶದ ಕೋಟ್ಯಂತರ ಜನರು ಪ್ರತಿದಿನ ಕಾಫಿ ಕುಡಿಯುತ್ತಿದ್ದಾರೆ. ಇನ್ನೂ ಒಂದು ಉದಾಹರಣೆ. ಎಂದೋ ಯಾರೋ ಪ್ರವಾದಿಗಳು ಹಿಂಸೆಯನ್ನು ಬೋಧಿಸಿದರು ಎಂದುಕೊಳ್ಳಿ. ಅವರ ಅನುಯಾಯಿಗಳು ಸಾವಿರಾರು ವರ್ಷಗಳು ಕಳೆದರೂ ಹಿಂಸೆಯನ್ನೇ ಮುಂದುವರಿಸುತ್ತಾರೆ. ಭಯೋತ್ಪಾದಕರಾಗುತ್ತಾರೆ. ಎಲ್ಲರಿಗೂ ತೊಂದರೆಯಾಗುತ್ತದೆ.
ಇತಿಹಾಸವನ್ನು ಸರಿಯಾಗಿ ಅರಿಯುವುದರಿಂದ, ಪ್ರಾಮಾಣಿಕವಾಗಿ ಸಂಶೋಧನೆ ಮಾಡುವುದರಿಂದ, ಹಿಂದಿನಿಂದ ಈವರೆಗೆ ಜನಜೀವನ, ಪರಿಸರ, ಪ್ರಾಣಿಜೀವನ ಹೇಗೆ ನಡೆದುಬಂದಿದೆ ಎನ್ನುವುದು ತಿಳಿಯುತ್ತದೆ. ನಮ್ಮ ಈಗಿನ ಸ್ಥಿತಿ ಹೆಮ್ಮೆ ಪಡುವಂತಹ ಸಂಗತಿಯೋ? ಅಲ್ಲವೋ? ಎಂಬುದು ತಿಳಿಯುತ್ತದೆ. ನಮ್ಮದು ಸುಧಾರಣೆ ಹೊಂದಿರುವ ಜೀವನವೋ ಅಲ್ಲವೋ ಎಂಬುದೂ ತಿಳಿಯುತ್ತದೆ.
ಅಲ್ಲದೇ ಇತಿಹಾಸ ಕೆದಕುವುದು ಪತ್ತೇದಾರಿ (ಡಿಟೆಕ್ಟಿವ್) ಪುಸ್ತಕ ಓದಿದಂತೆ ರೋಮಾಂಚಕ ಅನುಭವ! ಥ್ರಿಲ್!!
ನಮ್ಮ ಗತಕಾಲದ ಬಗ್ಗೆ ಹಿಂದಿನ ತಲೆಮಾರುಗಳಿಂದ ಬಂದಿರುವ ಬಾಯಿಮಾತಿನ ದಾಖಲೆಗಳಿವೆ. ಬರಹ ರೂಪದ ದಾಖಲೆಗಳಿವೆ. ಭೂಗರ್ಭದಲ್ಲೂ ಅನೇಕ ದಾಖಲೆಗಳು ಸಿಗುತ್ತವೆ. ವಿಜ್ಞಾನದ ನೆರವಿನಿಂದಲೂ ಅನೇಕ ರೀತಿಯ ದಾಖಲೆಗಳನ್ನು ಅರಿಯಬಹುದು. ಸಿಕ್ಕ ದಾಖಲೆಗಳನ್ನು ಪರಿಶೀಲಿಸಬಹುದು. ಇವನ್ನೆಲ್ಲ ನಮಗಾಗಿ ದಾಲಿಸುವುದು ಇತಿಹಾಸಕಾರರ ಕೆಲಸ. ಆದರೆ ಅವರು ಪ್ರಾಮಾಣಿಕರಾಗಿರಬೇಕು. ಈವರೆಗೆ ತಿಳಿದಿರುವ ವಿಷಯಗಳನ್ನು ಸರಿಯಾಗಿ ವ್ಯಾಖ್ಯಾನಿಸಬೇಕು. ಸುಳ್ಳುಗಳನ್ನು ಹರಡುವ ಕುಚೇಷ್ಟೆ ಮಾಡಬಾರದು. ಅವರಿಗೆ ಯಾವುದೇ ಪಕ್ಷಪಾತ ಇರಬಾರದು. ಹೊಸ ಸತ್ಯಗಳು ತಿಳಿದಾಗ ಹಳೆಯ ಸಂಗತಿಗಳನ್ನು ಬದಲಿಸಿ ಹೊಸ ವಿಷಯ ತಿಳಿಸಬೇಕು.
No comments:
Post a Comment