Thursday 22 July 2010

ಪ್ರಾಚೀನ ಭಾರತದಲ್ಲಿ ಜನಜೀವನ ಹೇಗಿತ್ತು?


ಇಂದು ನಾವು ಟಿವಿ ನೋಡುತ್ತೇವೆ. ಕಂಪ್ಯೂಟರ್ ಬಳಸುತ್ತೇವೆ. ಇಂಟರ್ನೆಟ್ ಬಂದ ಮೇಲಂತೂ ಬಹಳ ಅನುಕೂಲವಾಗಿದೆ. ಆದರೆ ಪ್ರಾಚೀನ (ಬಹಳ ಹಿಂದಿನ) ಕಾಲದ ಭಾರತ ಹೇಗಿತ್ತು? ಆಗಿನ ಜನರು ಹೇಗಿದ್ದರು? ಅವರು ಜೀವನಕ್ರಮ ಹೇಗಿತ್ತು? ಅವರು ಯಾವ ರೀತಿಯ ಬಟ್ಟೆ ಹಾಕಿಕೊಳ್ಳುತ್ತಿದ್ದರು? ಯಾವ ತಿನಿಸುಗಳನ್ನು ತಿನ್ನುತ್ತಿದ್ದರು? ಆಗಿನ ಮಕ್ಕಳು ಆಟಿಕೆಗಳನ್ನು ಇಟ್ಟುಕೊಂಡು ಆಡುತ್ತಿದ್ದರೆ? ಶಾಲೆಗೆ ಹೋಗುತ್ತಿದ್ದರೆ? `ಹೋಮ್ ವಕರ್್' ಮಾಡುತ್ತಿದ್ದರೆ?

ನಿಮಗೆ ಆಶ್ಚರ್ಯವಾಗಬಹುದು. ಸಾವಿರಾರು ವರ್ಷಗಳ ಹಿಂದೆಯೂ  ಭಾರತದಲ್ಲಿ ಜನಜೀವನ ಸರಿಸುಮಾರು ಈಗಿರುವಂತೆಯೇ ಇತ್ತು! ಟಿವಿ, ಇಂಟರ್ನೆಟ್, ಮೋಟಾರ್ ಕಾರ್ ಮುಂತಾದ ಈಗಿನ ಅನೇಕ ತಾಂತ್ರಿಕ ಸಾಧನಗಳು ಇಲ್ಲದಿದ್ದರೂ ಆಗಿನ ಜನರೂ ವೈವಿಧ್ಯಮಯ ಸಾಧನಗಳನ್ನು ಬಳಸುತ್ತಿದ್ದರು. ಆನಂದವಾಗಿ ಜೀವನದ ಸಂತೋಷ ಅನುಭವಿಸುತ್ತಿದ್ದರು.

ಕ್ರಿ.ಪೂ. 3500 ವರ್ಷಗಳ ಹಿಂದಿನ ಸಿಂಧೂ-ಸರಸ್ವತಿ ನಾಗರಿಕತೆಯು ವೈದಿಕ ನಾಗರಿಕತೆ ಎಂಬುದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಐದಾರು ಸಾವಿರ ವರ್ಷಗಳ ಹಿಂದೆ ಈ ಹಿಂದೂಗಳು ದೊಡ್ಡ ನಗರಗಳನ್ನು ನಿಮರ್ಿಸಿದ್ದರು. ವಿಶಾಲವಾದ ನೇರವಾದ ರಸ್ತೆಗಳನ್ನು ನಿಮರ್ಿಸಿದ್ದರು. ಇಟ್ಟಿಗೆಗಳಿಂದ ಸುಂದರವಾದ, ವಿಶಾಲವಾದ ಮನೆಗಳನ್ನು ಕಟ್ಟಿಕೊಂಡಿದ್ದರು. ಪ್ರತಿ ಮನೆಗೂ ಖಾಸಗಿ ಸ್ನಾನಗೃಹ, ಶೌಚಾಲಯಗಳಿದ್ದವು! ಸಿಂಧೂ ಕಣಿವೆಯ ಮಕ್ಕಳು ಆಟಿಕೆಗಳೊಂದಿಗೆ ಆಡುತ್ತಿದ್ದರು. ಮಹಿಳೆಯರು ಮೇಕಪ್, `ಲಿಪ್ಸ್ಟಿಕ್' (ಈಗಿನ ರಾಸಾಯನಿಕ ಲಿಪ್ಸ್ಟಿಕ್ಕಲ್ಲ) ಸಹ ಬಳಸುತ್ತಿದ್ದರು!!

ಇವೆಲ್ಲ ನಮಗೆ ಹೇಗೆ ಗೊತ್ತಾಯಿತು? 1922ರಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಹರಪ್ಪ ಎಂಬ ಕುತೂಹಲಕಾರಿ ಸ್ಥಳದಲ್ಲಿ ಪ್ರಾಚೀನ ನಗರದ ಅವಶೇಷಗಳನ್ನು ಪತೆಹಚ್ಚಿದರು! ಈಗ ಈ ಪ್ರದೇಶ ಪಾಕಿಸ್ತಾನಕ್ಕೆ ಸೇರುತ್ತದೆ. ಹರಪ್ಪದಿಂದ 700 ಕಿ.ಮೀ. ದೂರದಲ್ಲಿ ಮಹೆಂಜೊ-ದಾರೊ ಎಂಬ ಸ್ಥಳ ಇದೆ. ಅಲ್ಲಿಯೂ ಪ್ರಾಚೀನ ನಗರದ ಅವಶೇಷಗಳನ್ನು ಅಗೆದು ಹೊರಗೆ ಕಾಣಿಸಿದರು. ಗುಜರಾತಿನ ಧೋಲವೀರದಲ್ಲೂ ಪ್ರಾಚೀನ ನಗರ ಪತ್ತೆಯಾಯಿತು. ಈ ನಾಗರಿಕತೆಯನ್ನು `ಹರಪ್ಪ ನಾಗರಿಕತೆ', `ಸಿಂಧೂ ಕಣಿವೆ ನಾಗರಿಕತೆ' ಎಂದು ಕರೆದರು.

ಈ ಪ್ರದೇಶದ ಜನರು ಬರೀ ಸಿಂಧೂ ನದಿಯನ್ನು ಮಾತ್ರ ಆಶ್ರಯಿಸಿರಲಿಲ್ಲ, ಅತಿ ವಿಶಾಲವಾದ ಸರಸ್ವತೀ ನದಿ ಅವರ ಜೀವನಾಡಿಯಾಗಿತ್ತು ಎಂಬ ಅಂಶ ಈಚೆಗೆ ಸಾಬೀತಾಗಿದೆ. ಉಪಗ್ರಹಗಳಿಂದ ತೆಗೆದ ಚಿತ್ರಗಳು ವೇದಗಳಲ್ಲಿ ಹೇಳಿರುವ ಸರಸ್ವತಿ ನದಿಯ ಪಾತ್ರವನ್ನು ಗುರುತಿಸಿವೆ. ಈಗ ಹರಪ್ಪ ನಾಗರಿಕತೆಯನ್ನು `ಸಿಂಧೂ-ಸರಸ್ವತಿ ನಾಗರಿಕತೆ' ಎಂದು ಸಕಾರಣವಾಗಿ ಕರೆಯಲಾಗುತ್ತಿದೆ.

No comments:

Post a Comment